ಕ್ರೀಡೆಗಳು

ಗೇಮ್ಸ್ ಎಂಡ್ ಸ್ಪೋಟ್ರ್ಸ್ ಎಂದರೆ ಆಟಗಳು ಹಾಗೂ ಮೇಲಾಟ ಎಂದರ್ಥ. ಇಲ್ಲಿ ಕ್ರೀಡೆ ಎಂದರೆ ವೈಯಕ್ತಿಕ ಸ್ಪರ್ಧೆ. ಆಟ ಎಂದರೆ ಗುಂಪುಸ್ಪರ್ಧೆ ಎಲ್ಲ ಆಟಗಳನ್ನು ಕ್ರೀಡೆ ಓಲಿಂಪಿಕ್ ಕ್ರೀಡೆ ಇತ್ಯಾದಿಗಳಲ್ಲಿ ಆಟ ಮೇಲಾಟಗಳೆರಡೂ ಇವೆ. ಆದ್ದರಿಂದ ಕ್ರೀಡೆಯನ್ನು ಸುಸಂಬದ್ಧ ಚೌಕಟ್ಟಿನ ಚಟುವಟಿಕೆಯಾಧಾರಿತ ವ್ಯವಸ್ಥೆ ಎಂದು ಹೇಳಬಹುದಾಗಿದೆ. ಕ್ರೀಡೆಯ ಮೂಲಾರ್ಥ ಮನೋಲ್ಲಾಸ ನೀಡುವದು ಎಂದಿದೆಯಾದರೂ ಸರ್ಕಾರಿ ಹೊರವಲಯ ಮುದ್ರಣಾಲಯ ತನ್ಮೂಲಕ ದೈಹಿಕ ಹಾಗೂ ಮಾನಸಿಕ ದಾಢ್ರ್ಯತೆಯನ್ನು ಬೆಳೆಸುವದೂ ಅಷ್ಟೆ ಮುಖ್ಯವಾಗಿದೆ. ಹೀಗಾಗಿ ಕ್ರೀಡೆ ಎಂಬ ಶಬ್ದವನ್ನು ಇಲ್ಲಿ ವಿಶಾಲಾರ್ಥದಲ್ಲಿ ಬಳಸಿಕೊಳ್ಳಲಾಗಿದೆ.

	ದೇಹ, ಮನಸ್ಸು ಹಾಗೂ ಬುದ್ಧಿಗಳ ಸಹಯೋಗದಿಂದ ಮಾಡುವ ಪ್ರತಿಯೊಂದು ಕೌಶಲ್ಯಯುತವಾದ ಕಾರ್ಯವೂ ಕ್ರೀಡಾಚೌಕಟ್ಟಿನಲ್ಲಿಯೇ ಬರುತ್ತದೆ. ಕ್ರೀಡೆಯನ್ನು ಒಂದು ಕಲೆ, ವಿಜ್ಞಾನ, ಸಂಸ್ಕøತಿ ಎಂದೂ ಕರೆಯಲಾಗಿದೆ. ನಮ್ಮ ನಾಗರಿಕತೆಯ ಹಾಗೂ ಸಂಸ್ಕøತಿಯ ಮೂಲಬೇರನ್ನು ಕ್ರೀಡೆಗಳಲ್ಲಿ ಗುರುತಿಸಲಾಗಿದೆ.

	ಕ್ರೀಡೆ ಮಾನವನಷ್ಟೇ ಪ್ರಾಚೀನ ಮಾನವನ ವಿಕಾಸವನ್ನು ಅವಲೋಕಿಸಿದಾಗ ಅವನು ತನ್ನ ಆಹಾರಕ್ಕಾಗಿ, ನೆಲೆಗಾಗಿ, ಒಟ್ಟಿನಲ್ಲಿ ಇರುವಿಕೆಗಾಗಿ ನಡೆಸುತ್ತಿದ್ದ ಹೋರಾಟದ ಅನಿವಾರ್ಯ ಚಟುವಟಿಕೆ ಹಿನ್ನೆಲೆಯಲ್ಲಿ ಕ್ರೀಡೆಯ ರೂಪವನ್ನು ಗುರುತಿಸಬಹುದಾಗಿದೆ. ಗವಿವಾಸಿಯಾಗಿದ್ದ ಈತ ಕೃಷಿ ಕಲಿತ. ಕಲ್ಲಿನ ಬದಲು ಬಿಲ್ಲು ಬಂತು ಗುರಿಮುಖ್ಯವಾಯಿತು.

	ಕಾಲ ಉರಳಿದಂತೆ ಗುಂಪುಗಳ ರಚನೆ ನಂತರ ಗುಂಪು ಗುಂಪಿನ ಮಧ್ಯ ಯುದ್ಧ ಅದಕ್ಕಾಗಿ ಯುದ್ಧ ಕೌಶಲ್ಯ, ಯುದ್ಧದಲ್ಲಿ ಆನೆ, ಕುದುರೆ ಸವಾರಿ, ಈಟಿ, ಬಿಲ್ಲು ಬಾಣಗಳ ಬಳಕೆ ಪ್ರಾರಂಭವಾದವು. ಯುದ್ಧಕ್ಕಾಗಿ ಕಿರಿಯರನ್ನು ಅಣಿಗೊಳಿಸಲು ತರಬೇತಿ ಅನಿವಾರ್ಯವಾಯಿತು. ಮಲ್ಲಯುದ್ಧ, ಕುದುರೆಸವಾರಿ, ಗುರಿಹೊಡೆಯುವ ಮುಂತಾದ ಒಂದೊಂದೇ ಕ್ರೀಡೆಗಳು ಸಾಕಾರಗೊಂಡವು.

	ಆಗಿನ ಮಾನವನಿಗೂ ಮನರಂಜನೆ ಮುಖ್ಯವಾಗಿರಬೇಕು. ತನ್ನ ಇರುವಿಕೆಗೂ ಹೊಟ್ಟೆ ಹೊಡೆಯುವ ದುಡಿಮೆಗೂ, ಸಾಮಾಜಿಕ ಜೀವನದ ಅಗತ್ಯತೆಗೂ ಅನುಕೂಲವಾಗುವಂಥ ಕ್ರೀಡೆಗಳನ್ನು ಸೃಷ್ಟಿಸಿದ. ವಯಸ್ಕ ಜೀವನಕ್ಕೆ ಕಿರಿಯರನ್ನು ಅಣಿಗೊಳಿಸುವಂಥ ಆಟಗಳನ್ನು ಆಡಿದ. ತನ್ನ ಧಾರ್ಮಿಕ ಹಿನ್ನೆಲೆಯಲ್ಲೂ ಇಂಥ ಕ್ರೀಡೆಗಳ ಮೂಲಕ ಮನರಂಜನೆ ಪಡೆದಿರಬೇಕು.

	ಕ್ರೀಡೆಗಳ ಇತಿಹಾಸವನ್ನು ಅವಲೋಕಿಸಿದಾಗ ಬಗೆ ಬಗೆಯ ಕ್ರೀಡೆಗಳು ಐದು ಸಾವಿರ ವರ್ಷಗಳ ಹಿಂದೆಯೇ ಕಂಡು ಬಂದಿವೆ. ಪ್ರಾಚೀನ ಈಜಿಪ್ಪನಲ್ಲಿ ಮಲ್ಲಯುದ್ಧ, ಅಂಗಸಾಧನೆ, ಭಾರ ಎತ್ತುವುದು ಚೆಂಡಾಟ, ಬೇಟೆ, ಮೀನು ಹಿಡಿಯುವುದು ಮುಂತಾದ ಕ್ರೀಡೆಗಳಿದ್ದವಂತೆ.

	ಪ್ರಾಚೀನ ಗ್ರೀಸ್‍ನಲ್ಲಿ ಹೋಮರಿಕ್ ಯುಗ ಕ್ರೀಡೆಗಳ ದೃಷ್ಟಿಯಿಂದ ಪ್ರಧಾನವಾಗಿದೆ. ಇಲಿಯಡ್‍ನಲ್ಲಿ ವರ್ಣಿತವಾಗಿರುವಂತೆ ರಥಪಂದ್ಯ, ಮುಷ್ಟಿಯುದ್ಧ, ಕೂಸ್ತಿ, ನೃತ್ಯ ಹಾಗೂ ನೀಳ ಈಟಿಗಳ ದ್ವಂದ್ವಯುದ್ಧಗಳಿದ್ದವು. ಗ್ರೀಕ್ ಶಾಲೆಗಳಲ್ಲಿ ಆಟ ಪಾಠಗಳೆರಡಕ್ಕೂ ಪ್ರಾಧಾನ್ಯತೆ ಇತ್ತು. ನಮ್ಮ ಮಕ್ಕಳು ಚಿಕ್ಕಂದಿನಿಂದಲೇ ಕ್ರಮಬದ್ಧ ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಏಕೆಂದರೆ ಅವರ ಸುತ್ತಲೂ ಅಂಥ ವಾತಾವರಣವಿಲ್ಲದೆ ಹೋದರೆ ಅವರೆಂದೂ ಸದ್ವರ್ತನೆಯ ಗುಣಶೀಲ ನಾಗರಿಕರಾಗಿ ಬೆಳೆಯಲಾರದು ಎಂದು ತತ್ವವೇತ್ರ ಸಾಕ್ರೆಟಿಸ್ ಹೇಳಿದ್ದಾನೆ. 
	`ಸದೃಢ ದೇಹದಲ್ಲಿ ಸುಸಂಸ್ಕøತ ಮನಸ್ಸು ಎಂಬ ಖ್ಯಾತ ಹೇಳಿಕೆ ಪ್ಲೇಟೊನದ ಗ್ರೀಕ್‍ರಿಗೆ ವಿರಾಮ ಹೆಚ್ಚು. ಅವರಿಗೆ ಸ್ನಾಯುಬಲ ಹಾಗೂ ವಿವೇಕಶಕ್ತಿಯನ್ನು ಬೆಳಸುವ ಚಪಲವಿತ್ತು. ಸಾಮರಸ್ಯವುಳ್ಳ ಪರಿಪೂರ್ಣ ವ್ಯಕ್ತಿತ್ವ ಸಾಧಿಸಲು ಅವರ ಯತ್ನಿಸಿದರು. ಪ್ರಾಚೀನ ಓಲಂಪಿಕ್ ಕ್ರೀಡೆಗಳನ್ನೂ ಸರ್ಕಾರಿ ಹೊರವಲಯ ಮುದ್ರಣಾಲಯ ರೂಪಿಸಿದರು.

	ಉಳಿದ ಸಂಸ್ಕøತಿಗಳಂತೆ ನಮ್ಮದೂ ಸರ್ಕಾರಿ ಹೊರವಲಯ ಮುದ್ರಣಾಲಯ ಪ್ರಾಚೀನ ವೈಭವ. ಸಿಂಧೂನದಿ ಸಂಸ್ಕøತಿಯಲ್ಲಿ ಕ್ರೀಡೆಗಳಿಗೆ ಮಹತ್ವದ ಸ್ಥಾನವಿತ್ತೆಂದು ತಿಳಿದುಬರುತ್ತದೆ. ಈಜುಕೊಳ ಆಗಿನ ಕಾಲದಲ್ಲಿ ನಿರ್ಮಾಣವಾಗಿತ್ತೆಂಬುದು ಗಮನಾರ್ಹ. ಸುಮಾರು ನಾಲ್ಕುವರೆ ಸಾವಿರ ವರ್ಷಗಳ ಹಿಂದೆಯೇ ಈ ನೆಲದ ಮಕ್ಕಳು ಆಡುತ್ತಿದ್ದ ಆಟಿಗೆ ಲಭಿಸಿವೆ.

	ವೇದಕಾಲದಲ್ಲಿ ಬೇಟೆ, ಕುದುರೆ ಹಾಗೂ ಆನೆ ಸವಾರಿ, ಮುಷ್ಟಿ ಯುದ್ಧ, ಬಿಲ್ಲುಗಾರಿಕೆ ಮುಂತಾದವುಗಳ ವರ್ಣನೆಯಿದೆ. ಅವರಿಗೆ ಅಹಾರ ವಿಜ್ಞಾನದ ಕ್ರಮವಾದ ಜ್ಞಾನವಿತ್ತಲ್ಲದೆ, ಗೊತ್ತಾದ ವಯಸ್ಸಿನವರೆಗೆ ಬ್ರಹ್ಮಚರ್ಯ ಪಾಲನೆ ಮಾಡುತ್ತರಿದ್ದರು. ದೈಹಿಕ ಶ್ರಮ ಹಾಗೂ ದೇಹದಂಡನೆಗೆ ಆಗ ಪ್ರಾಮುಖ್ಯತೆ ಇತ್ತು.

	ಕ್ರೀಡೆಗಳ ದೃಷ್ಟಿಯಿಂದ ಪುರಾಣಕಾಲವನ್ನು ಸ್ವರ್ಣಯುಗ ಎನ್ನಬಹುದು. ಬಿಲ್ಲುಗಾರಿಕೆ ಪ್ರಾಮುಖ್ಯವಾಗಿತ್ತು. ಮಲ್ಲಯುದ್ಧ, ಗಧಾಯುದ್ಧ, ಕತ್ತಿವರೆಸೆಗಳಷ್ಟೇ ಏಕೆ ಪಗಡಿ, ದೊಂಬರಾಟಗಳಂಥ ಕಸರತ್ತಿನ ಉಲ್ಲೇಖಗಳೂ ಇವೆ. ರಾಜಕುಮಾರರಿಗೆ ಗುರುಕುಲಗಳಲ್ಲಿ ದೈಹಿಕ, ಮಾನಸಿಕ ಹಾಗೂ ನೈತಿಕ ತಳಹದಿಯ ಶಿಕ್ಷಣವಿತ್ತು. ಯೋಗಸಾಧನೆ ಅವಶ್ಯವಾಗಿತ್ತು.

	ನಾಲಂದಾದಲ್ಲಿ ಕ್ರೀಡಾಂಗಣವಿತ್ತು. ಅಲ್ಲಿ ಓಡಿದ ಸ್ಪರ್ಧೆ, ಈಟಿ ಎಸೆತ, ಬಿಲ್ಲುಗಾರಿಕೆ, ಕತ್ತಿವರೆಸೆ, ಈಜು ಸ್ಪರ್ಧೆಗಳು ನಡೆಯುತ್ತಿದ್ದವು. ಇಲ್ಲಿ ಯೋಗ, ಪ್ರಾಣಾಯಾಮ, ಸೂರ್ಯನಮಸ್ಕಾರಗಳನ್ನು ಕಲಿಸಲಾಗುತ್ತಿತ್ತು. ತಕ್ಷ ಶಿಲಾ ವಿಶ್ವವಿದ್ಯಾಲಯ ಸೈನಿಕ ಶಿಕ್ಷಣದಲ್ಲಿ ಪ್ರಧಾನವಾಗಿತ್ತು.

	ಇದು ಪ್ರಾಚೀನ ಮುಗವಾಯಿತು. ಇನ್ನು ಮಧ್ಯಯುಗದಲ್ಲಿ ತಮ್ಮ ಅನುಕೂಲವನ್ನವಲಂಬಿಸಿ ವಿವಿಧ ಆಟಗಳನ್ನು ಆಡಿದರು. ಕೆಲವು ಕೈಬಿಟ್ಟು ಹೋದರೆ, ನೆಗೆತ, ಈಜು, ಕುಸ್ತಿ ಮುಂತಾದ ಕ್ರೀಡೆಗಳು ಭದ್ರವಾಗಿ ನೆಲೆಮೂರಿದವು. ಮುಂದೆ ಶ್ರೀಮಂತ ಹಾಗೂ ಬಲಹೀನ ವರ್ಗಗಳುಂಟಾದವು. ಆಗ ಸಾಮಾನ್ಯ ಕ್ರೀಡೆ ಹಾಗೂ ಶ್ರೀಮಂತರ ಹವ್ಯಾಸಿ ಕ್ರೀಡೆಗಳು ಬದಲಾದವು. 

	14-16ನೇ ಶ.ಮಾದಲ್ಲಿ ನವೋದಯದ ಗಾಳಿ ಬೀಸಿತು. ಜೀವನವೆಂದರೆ ಕೇವಲ ತ್ಯಾಗವಲ್ಲ. ಗುರಿ, ಭೋಗ, ಭಾಗ್ಯಗಳನ್ನು ಅನುಭವಿಸುವುದು ಎಂದ ತತ್ವಕ್ಕೆ ಜನ ತತ್ವ ಮತ್ತೊಮ್ಮೆ ಜಾರಿಗೆ ಬಂತು. ದೇಹಾರೋಗ್ಯ ಜೀವನಕ್ಕೆ ಅವಶ್ಯ ಎಂದು ಬಗೆಯಲಾಯಿತು. ಇಂಥ ಬದಲಾದ ಬದುಕು ಕ್ರೀಡೆಗಳ ಮೇಲೂ ಪರಿಣಾಮ ಬೀರಿತು. ಕಟ್ಟು ಹರಿದ ಚೇತನ ಆಟ ಓಟಗಳಲ್ಲಿ ಸಂತೋಷ ಪಡುವದನ್ನು ತಡೆಯುವದು ಯಾರಿಂದಲೂ ಆಗಲಿಲ್ಲ. ಔದ್ಯೋಗಿಕ ಕ್ರಾಂತಿ ತೀವ್ರಗೊಂಡಂತೆ ಕ್ರೀಡೆಗಳಲ್ಲೂ ಮಾರ್ಪಾಡು ಕಂಡುಬಂದು ಅವು ಸಾಮಾನ್ಯರ ಸ್ವತ್ತಾದವು.

	ಶಿಕ್ಷಣದಲ್ಲಿ ಕ್ರೀಡೆಗೆ ಸ್ಥಾನ ಪ್ರಾಪ್ತವಾಯಿತು. ಆಗಿನ ಶಿಕ್ಷಣವೆತ್ತರೂ ಸರ್ಕಾರಿ ಹೊರವಲಯ ಮುದ್ರಣಾಲಯ ಇದರ ಮಹತ್ವವನ್ನು ಗುರುತಿಸಿದರು. ರುಸೋ-ಹುಡುಗ ಮೊದಲ ವರ್ಷಗಳನ್ನು ಏನೂ ಮಾಡದೆ ಕಳೆಯುತ್ತಿದ್ದಾನಲ್ಲ ಎಂದು ನಿಮಗೆ ಕಸಿವಿಸಿ ಆಗುತ್ತಿದೆಯೇನು? ಅವನು ಸಂತೋಷವಾಗಿರುವದು ಸಾಮಾನ್ಯವೆ? ಜಿಗಿಯುತ್ತಾನೆ, ಆಡುತ್ತಾನೆ, ದಿನವೆಲ್ಲ ಓಡಾಡುತ್ತಾನೆ ಇದೇನು ಸಾಮಾನ್ಯವೇ? ಈಗಿನಷ್ಟು ಬಿಡುವಿಲ್ಲದ ಕಾಲ ಆತನ ಜೀವನದಲ್ಲಿ ಮುಂದೆಂದೂ ಬರುವದಿಲ್ಲ ಎಂದು ಹೇಳಿದ.

	ಮುಂದಿನ ಶತಮಾನದಲ್ಲಿ ರೂಸೋನ ವಿಚಾರ ಸರಣಿಯನ್ನು ಮುಂದುವರೆಸಿದವ ಕುಬರ್ತಿ ಪ್ರಾಚೀನ ಗ್ರೀಕ್‍ನ ದೃಢಚಿತ್ತ, ದೃಢಕಾಯ ಆದರ್ಶದಿಂದ ಆಕರ್ಷಿತನಾದ ಆತ ಜಗತ್ತಿನ ಇತಿಹಾಸವನ್ನು ನಾಲ್ಕು ಸಂಪುಟಗಳಲ್ಲಿ ಬರೆದು, ಆಧುನಿಕ ಓಲಿಂಪಿಕ್ಸ್‍ನ ಪುನರುತ್ಥಾನಕ್ಕೆ ಕಾರಣನಾಗಿ ತಾನೇ ಇತಿಹಾಸದ ಒಂದು ಅಧ್ಯಾಯವಾದ.

	ಕ್ರೀಡೆಗಳು ಮೊದಲಿಗಿಂತ ಈಗ ಹೆಚ್ಚು ಪ್ರಭಾವಶಾಲಿಗಳಾಗಿವೆ. ಕ್ರೀಡೆಯಲ್ಲಿನ ಪರಾಕ್ರಮ ದೇಶ ಹಾಗೂ ವ್ಯಕ್ತಿಯ ಘನತೆಯ ಪ್ರತೀಕವಾಗಿ ಜಗತ್ತಿನಾದ್ಯಂತ ಕಂಡುಬರುತ್ತಲಿದೆ. ದೇಶ ಹಾಗೂ ವಿದೇಶಗಳ ಜನರ ಸಂಪರ್ಕ ಹಾಗೂ ಸ್ನೇಹದ ಕೊಂಡಿಯಾಗಿದೆ. ಅಂತರಾಷ್ಟ್ರೀಯ ಸ್ನೇಹ ಹಾಗೂ ಸಾಂಸ್ಕøತಿಕ ಸೌಹಾರ್ದತೆಗೆ ಹಾದಿಯಾಗಿದೆ. ಕ್ರೀಡೆಗಳು ಪ್ರತಿಯೊಬ್ಬರಲ್ಲೂ ಕನಸನ್ನು ಮೂಡಿಸುತ್ತಲಿದೆ. ಈ ಕುರಿತ ಕೆಲ ತಜ್ಞರ ಹೇಳಿಕೆಗಳನ್ನು ಗಮನಿಸೋಣ.

	ಮಾರ್ಟಿನ್‍ರ ವಿಶ್ಲೇಷಣೆ- ಕ್ರೀಡೆಯಲ್ಲಿ ಭಾಗವಹಿಸುವ ರಾಷ್ಟ್ರ ತನ್ನ ಸಾಮಾಜಿಕ ಹಂತಗಳನ್ನು ಮೈಗೂಡಿಸಿಕೊಂಡ ಹಾಗೂ ಪ್ರಾಮುಖ್ಯತಾ ಪದ್ಧತಿ, ರಾಜಕೀಯ ಹಾಗೂ ಆರ್ಥಿಕ ಸಂಗತಿಗಳ ಸದೃಢತೆಯ ಅನೇಕ ಮುಖಗಳನ್ನು ತೋರಿಸಿಕೊಡುತ್ತದೆ ಎಂದಿದೆ.

	ಕೋಜನ್ಸ್ ಹಾಗೂ ಸ್ಟಂಫ್ - ಕ್ರೀಡೆಗಳು ಒಂದು ದೇಶದ ಜನರ ಬದುಕು, ಕೆಲಸ ಹಾಗೂ ಯೋಚನೆಗಳನ್ನು ಅರ್ಥಮಾಡಿಕೊಳ್ಳುವ ಮೈಲುಗಲ್ಲು ಅಲ್ಲದೆ ಇವು ಒಂದು ದೇಶದ ಸಾಂಸ್ಕøತಿಕ ಹಿನ್ನಲೆಯ ಮಾಪಕಗಳು ಎಂದಿದ್ದಾರೆ.	

	ಸಮಾಜತಜ್ಞ ಮ್ಯಾಕ್ಸ್ ವೇಬರ್ ಅವರಿಗೆ ಆಟ ಪ್ರಚಲಿತವಿದ್ದ ಐತಿಹಾಸಿಕ ಸಂಗತಿ ಒಂದು ಸಾಮಾಜಿಕ ಅದ್ಭುತವಾಗಿ ಕಂಡು ಬಂದಿದೆ.

	ಸಿಮೆಲ್ ಅವರು ಕ್ರೀಡಾ ಚಟುವಟಿಕೆಗಳು ಜನರನ್ನು ಹೆಚ್ಚು ಪ್ರೌಢರನ್ನಾಗಿಸಲು ಪ್ರಮುಖ ಪಾತ್ರವಹಿಸುತ್ತವೆ. ಎಂದು ಹೇಳಿದ್ದಾರೆ.

	ಮೀಡ್‍ರ ಪ್ರಕಾರ ಮಕ್ಕಳು ಆಟವಾಡುವುದನ್ನು ನೋಡಿದರೆ ಕ್ರೀಡೆಯು ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಕಾರಣ ಎನ್ನುವ ಸಂಗತಿಯ ವಿಶ್ಲೇಷಣೆಗೆ ಅರ್ಥ ಸಿಗುತ್ತದೆ ಎಂದಿದೆ.   

	ಎರ್ವಿನ್ ಸಾಫ್‍ಮನ್ ಕ್ರೀಡೆ ಎಂದರೆ ನಿರ್ದಿಷ್ಟ ಚಟುವಟಿಕೆಯುಳ್ಳ ಪದ್ಧತಿ (Siಣuಚಿಣeಜ ಚಿಛಿಣiviಣಥಿ sಥಿsಣem oಡಿ ಜಿoಛಿusseಜ gಚಿಣheಡಿiಟಿg) ಇಲ್ಲಿ ಪ್ರತಿ ಆಟಗಾರ ಹಾಗೂ ಅವನ ಪಾತ್ರ ಮತ್ತು ಆ ಕ್ರೀಡೆಯ ನಿಯಮ ಇವುಗಳ ಪರಸ್ಪರ ಸಂಬಂಧಗಳನ್ನು ಹೊಂದಿವೆ ಎನ್ನುತ್ತಾರೆ.

	ಕ್ರೀಡೆಗಳು ಹೀಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಸಾಂಸ್ಕøತಿಕ ಮುಂತಾದ ಮೌಲ್ಯಗಳನ್ನು ಕ್ರೋಢಿಕರಿಸುತ್ತ ತನ್ನದೇ ಆದ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಲಿವೆ. ಹವ್ಯಾಸಿ ಸ್ವರೂಪದ ಇವು ವಾಣಿಜ್ಜೀಕರಣವೂ ಆಗುತ್ತಲಿವೆ. ವಿಜ್ಞಾನ ಹಾಗೂ ತಂತ್ರಜ್ಞಾನದ ನೆರವಿನಿಂದ ಕ್ರೀಡಾಸ್ಪರ್ಧೆಗಳು ತಮ್ಮ ಔನತ್ಯದೆಡೆಗೆ ಸಾಗುತ್ತಲಿವೆ. ಇದರೊಡನೆ ಉದ್ದೀಪನ ಮದ್ದುಗಳಂಥ ಪಿಡುಗು ಸಹ ಹರಡಿಕೊಳ್ಳುತ್ತಿರುವದು ವಿಷಾದನೀಯ. ಇದೇನೇ ಇದ್ದರೂ ಸಹ ಮಾನವನ ಮಹತ್ವಾಕಾಂಕ್ಷೆಯ ಕ್ರೀಡೆಗಳು ಇನ್ನೂ ಹೆಚ್ಚು ಸ್ಪರ್ಧಾತ್ಮಕವಾಗಲಿವೆ.

	ಕ್ರೀಡಾಸಾಧನೆಯಲ್ಲಿ ಮಾನವನ ಅದಮ್ಯ ಚೇತನಕ್ಕೆ ಸಂಬಂಧಿಸಿದ ಸಂಗತಿಗಳು ಸ್ಫೂರ್ತಿದಾಯಕವಾಗಿವೆ. ಒಲಂಪಿಕ್ಸ್ ಕ್ರೀಡೆಗಳ ಇತಿಹಾಸದಲ್ಲಿ ಇಂಥ ಕೆಲ ಉದಾಹರಣೆಗಳನ್ನು ನೋಡಬಹುದು.

	ತನ್ನ ಸತತ ಪ್ರಯತ್ನದಿಂದ ಪುಟ್ಟ ಫಿನ್ಲೆಂಡ್‍ದೇಶ ಸ್ವರ್ಣ ಪದಕದ ಸಂಪಾದನೆಯಲ್ಲಿ ಅಮೆರಿಕಕ್ಕೆ ಸರಿದೊರೆಯಾಗುವಂತೆ ಮಾಡಿದ ಕ್ರೀಡಾಪಟ, ಪಾವೊನುರ್ಮ.

	ಮಗುವಾಗಿದ್ದಾಗ ಪೋಲಿಯೋ ಪೀಡಿತನಾಗಿದ್ದು, ನಿಂತಲ್ಲಿಂದಲೇ ನೆಗೆಯುವ ಹೊಸ ವಿಧಾನ ರೂಢಿಸಿಕೊಂಡು; ನೆಗೆತ ಸ್ಪರ್ಧೆಗಳಲ್ಲಿ ಒಂದೇ ದಿನದಲ್ಲಿ ಮೂರು ಚಿನ್ನದ ಪದಕ ಸಂಪಾದಿಸಿದವ ರೇ ಯೂರಿ.

	ಪಾದ್ರಿ ಜೀವನದಲ್ಲೂ ಕೋಲುಜಿಗಿತ ಮುಂದುವರೆಸಿ ವಾಲ್ಟಿಂಗ್ ವಿಕಾರ್ ಎನ್ನಿಸಿಕೊಂಡವ ಬಾಬ್ ರಿಚಡ್ರ್ಸ್.

	ತರಬೇತಿ ಇಲ್ಲದೆ ಮ್ಯಾರಾಥಾನ್ ಓಡಿ ಸ್ವರ್ಣ ಗೆದ್ದವ, ವೇಗದ ಓಟಗಾರ ಮಾನವರೈಲು ಎಮಿಲಿ ಝಟೊಪೆಕ್.

	ಯಾವ ತರಬೇತಿ ಇಲ್ಲದೆಯೇ ಸತತ ಪರಿಶ್ರಮದಿಂದ ಖ್ಯಾತ ಓಟಗಾರನಾಗಿ, ಜಗತ್ತನ್ನು ಮೂರು ಬರಿ ಸುತ್ತಿ ಬಂದಷ್ಟು ಓಡಿದವ ವ್ಲದಿಮಿರ್ ಕುಟ್ಜ್.

	ಪಕ್ಕೆಲಬು ಮುರಿದು, ಎದೆಯಿಂದ ತೊಡೆಯತನಕ ಬ್ಯಾಂಡೇಜ್ ಕಟ್ಟಿಸಿಕೊಂಡಿದ್ದರೂ ಡಿಸ್ಕಸ್ ಎಸೆತದಲ್ಲಿ ಚಿನ್ನ ಪಡೆದವ ಆಲ್ ಆರ್ಟರ್.

	ನಿಗ್ರೊ ಪಾದರಕ್ಷೆ ತಯಾರಕನ ಮಗನಾದ ಉದ್ದಜಿಗಿತದಲ್ಲಿ ನೂತನ ವಿಕ್ರಮ ಸ್ಥಾಪಿಸಿದಾತ ಬಾಬ್ ಬೀಮನ್.

	ಒಮ್ಮೆ ಒಂಭತ್ತನೆಯವನಾದರೂ ಮುಂದಿನ ಸಲ ಪ್ರಥಮನಾದವರಾನ್ ಕ್ಲಾರ್ಕ್.

	ತನ್ನ 40ನೇ ವಯಸ್ಸಿನಲ್ಲಿ ಮ್ಯಾರಾಥನ್ ಗೆದ್ದವ ಆಲ್ವಿನ್ ಸ್ಟೆನ್‍ರೋಸ್. 

	ಹತ್ತು ಸಾವಿರ ಮೀ. ಓಟದ ಸ್ಪರ್ಧೆಯಲ್ಲಿ ಬಿದ್ದರೂ, ಎದ್ದು ಓಡಿ ದಾಖಲೆ ಮಾಡಿದವ ಲಾಸ್ ವೈರನ್.

	ಕಾಲು ಮುರಿದು ಮೂರು ವರ್ಷ ಆಸ್ಪತ್ರೆಯಲ್ಲಿದ್ದು, ಅಗಾಧ ಇಚ್ಛಾಶಕ್ತಿಯಿಂದ ಎತ್ತರಜಿಗಿತದಲ್ಲಿ ಸ್ವರ್ಣ ಪಡೆದವ ವಾಲೆರಿ ಭ್ರೂಮನ್.

	ಕಳೆದ ಒಲಂಪಿಕ್ಸ್‍ನ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಜಾವೆಲಿನ್ ಎಸೆತದಲ್ಲಿ ತೀವ್ರ ಸ್ನಾಯು ಸೆಳೆತದಿಂದ ಬಿದ್ದು ನಡೆಯಲೂ ಆಗದ ಸ್ಥಿತಿಯಲ್ಲಿ 800 ಮೀ. ಓಡಿದ ಕರ್ನಾಟಕ ಅಪ್ಪಟ ಗ್ರಾಮೀಣ ಪ್ರತಿಭೆ - ಜೆ.ಜೆ. ಶೋಭಾ.

	ಇವು ಕೆಲವು ಮಾತ್ರ. ಪ್ರತಿಕೂಲ ಪರಿಸ್ಥಿತಿಯಲ್ಲೂ ಅದ್ಭುತ ಇಚ್ಛಾಶಕ್ತಿಯಿಂದ, ಅಸಾಧಾರಣ ಕ್ರೀಡಾ ಚೇತನಗಳಾಗಿರುವ ತಾರಾಮಂಡಲ ಬಹಳ ದೊಡ್ಡದು. ಕ್ರೀಡೆಯಲ್ಲಿನ ಮಾನಸಿಕ ದೃಢತೆಯ ಪ್ರಾಮುಖ್ಯತೆಯನ್ನು ಇವು ತೋರಿಸಿಕೊಡುತ್ತವೆ. 									                   (ಬಿ.ಎಲ್.ಆರ್.)
									     (ಪರಿಷ್ಕರಣೆ: ಎನ್.ಎಸ್.ಪಾಟೀಲ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ